ಸಚಿನ್ ಪುತ್ರನೆಂದು ಅರ್ಜುನ್ ಗೆ ಅವಕಾಶ ಸಿಗಲ್ಲ: ಮುಂಬೈ ಕೋಚ್ ಜಹೀರ್ ಖಾನ್

ಮುಂಬೈ| Krishnaveni K| Last Modified ಶುಕ್ರವಾರ, 19 ಫೆಬ್ರವರಿ 2021 (10:48 IST)
ಮುಂಬೈ: ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಪಾಲಾಗಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಗೆ ತಂಡದಲ್ಲಿ ಅವಕಾಶ ಸುಮ್ ಸುಮ್ನೇ ಸಿಗಲ್ಲ ಎಂದು ಮುಂಬೈ ಕೋಚ್ ಜಹೀರ್ ಖಾನ್ ಹೇಳಿದ್ದಾರೆ.

 
‘ಅರ್ಜುನ್ ಯಾವತ್ತೂ ತಾನೊಬ್ಬ ದಿಗ್ಗಜನ ಪುತ್ರ ಎಂಬುದನ್ನು ನೆನಪಿಡಬೇಕು. ಆದರೆ ಆತನಿಗೆ ನಾನು ಸಾಕಷ್ಟು ಸಲಹೆ ಕೊಡುತ್ತಿದ್ದೇನೆ. ಒಬ್ಬ ಕ್ರಿಕೆಟಿಗನಾಗಿ ರೂಪುಗೊಳ್ಳಬೇಕಾದರೆ ಏನು ಬೇಕೋ ಅದೆಲ್ಲಾ ನಮ್ಮ ತಂಡದಲ್ಲಿ ಸಿಗುತ್ತದೆ. ಆತ ಇನ್ನೂ ಯುವ ಆಟಗಾರ. ಸಾಮರ್ಥ್ಯ ಸಾಬೀತುಪಡಿಸಬೇಕು. ಆತನ ಬಳಿ ಅವಕಾಶಗಳಿವೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು’ ಎಂದು ಜಹೀರ್ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :