Widgets Magazine

ನಿವೃತ್ತಿ ಸುತ್ತ ಸುತ್ತಿಕೊಂಡ ವಿವಾದ ಬಗೆಹರಿಸಿದ ಆಶಿಷ್ ನೆಹ್ರಾ

ನವದೆಹಲಿ| Krishnaveni| Last Modified ಶುಕ್ರವಾರ, 3 ನವೆಂಬರ್ 2017 (08:49 IST)
ನವದೆಹಲಿ: ಟೀಂ ಇಂಡಿಯಾದಲ್ಲಿ ಹಲವು ಜನಪ್ರಿಯ ಕ್ರಿಕೆಟಿಗರಿಗೇ ಸಿಗದ ವೈಭವದ ವಿದಾಯ ಆಶಿಷ್ ನೆಹ್ರಾಗೆ ಸಿಕ್ಕಿದ್ದು ಹಲವರ ಹುಬ್ಬೇರಿಸಿದೆ. ಇದಕ್ಕೆ ಸ್ವತಃ ನೆಹ್ರಾ ಉತ್ತರಿಸಿದ್ದಾರೆ.
 
ನೆಹ್ರಾ ತಮ್ಮ ತವರು ಮೈದಾನದಲ್ಲಿ ನಿವೃತ್ತಿಗೆ ಅವಕಾಶ ಮಾಡಿಕೊಡಬೇಕೆಂದು ಆಯ್ಕೆಗಾರರಿಗೆ ಮನವಿ ಮಾಡಿದ್ದರು. ಹೀಗಾಗಿಯೇ ಅವರಿಗೆ ತವರಿನಲ್ಲಿ ವಿದಾಯವಾಗುವ ಅವಕಾಶ ಸಿಕ್ಕಿತು ಎಂದು ವರದಿಯಾಗಿತ್ತು.
 
ಆದರೆ ಇದೆಲ್ಲವನ್ನೂ ನೆಹ್ರಾ ನಿರಾಕರಿಸಿದ್ದಾರೆ. ನಾನು ಕ್ರಿಕೆಟ್ ಗೆ ಬರುವಾಗಲೂ ಆಯ್ಕೆಗಾರರ ಅನುಮತಿ ಕೇಳಿಕೊಂಡು ಬಂದಿರಲಿಲ್ಲ. ಇದೀಗ ಹೋಗುವಾಗಲೂ ಅವರ ಅನುಮತಿ ಪಡೆದು ಹೋಗುತ್ತಿಲ್ಲ. ನಾನು ಯಾವತ್ತೂ ನನ್ನ ತವರಿನಲ್ಲಿ ವಿದಾಯ ಹೇಳಲು ಅವಕಾಶ ಕೊಡಿ ಎಂದು ಕೇಳಿಕೊಂಡಿರಲಿಲ್ಲ. ಅದಾಗಿಯೇ ನನಗೆ ಒಲಿಯಿತು ಎಂದು ನೆಹ್ರಾ ಸ್ಪಷ್ಟನೆ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :