ಮುಂಬೈ: ಕೆಎಲ್ ರಾಹುಲ್ ಜೊತೆ ಇನ್ನು ಮೂರು ತಿಂಗಳಲ್ಲಿ ತಮ್ಮ ಮದುವೆ ನಡೆಯಲಿದೆ ಎಂಬ ಸುದ್ದಿಗಳ ಬಗ್ಗೆ ಅಥಿಯಾ ಶೆಟ್ಟಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.‘ಇನ್ನು ಮೂರು ತಿಂಗಳಲ್ಲಿ ನಡೆಯಲಿರುವ ಈ ಮದುವೆಗೆ ನನಗೆ ಆಹ್ವಾನ ಬರಬಹುದೇನೋ’ ಎಂದು ನಗುವಿನ ಇಮೋಜಿ ಪ್ರಕಟಿಸಿ ಅಥಿಯಾ ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ಮೂರು ತಿಂಗಳೊಳಗೆ ಮದುವೆಯಾಗುತ್ತಿರುವ ಸುದ್ದಿ ಸುಳ್ಳು ಎಂದಿದ್ದಾರೆ.ಇದಕ್ಕೂ ಮೊದಲು ಅಥಿಯಾ ತಂದೆ, ನಟ ಸುನಿಲ್ ಶೆಟ್ಟಿ ಕೂಡಾ ಸದ್ಯಕ್ಕೆ ಮದುವೆ ಯೋಜನೆಯಿಲ್ಲ ಎಂದಿದ್ದರು.