Widgets Magazine

ಪ್ರಧಾನಿ ಮೋದಿಗಿಂತಲೂ ಕೂಲ್ ಆಸ್ಟ್ರೇಲಿಯಾ ಪ್ರಧಾನಿ! ಕಾರಣವೇನು ಗೊತ್ತಾ?

ನವದೆಹಲಿ| Krishnaveni K| Last Modified ಶುಕ್ರವಾರ, 25 ಅಕ್ಟೋಬರ್ 2019 (10:08 IST)
ನವದೆಹಲಿ: ಭಾರತದ ಪ್ರಧಾನಿ ಮೋದಿ ಆಗಾಗ ಕೆಲವು ಅಚ್ಚರಿಯ ಕೆಲಸ ಮಾಡುತ್ತಾ, ಸರಳತನ ಮೆರೆಯುವ ಮೂಲಕ ತಾವೆಷ್ಟು ಕೂಲ್ ಎಂದು ತೋರಿಸಿಕೊಡುತ್ತಾರೆ. ಆದರೆ ಅವರಿಗಿಂತಲೂ ಕೂಲ್ ತಾನು ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ತೋರಿಸಿಕೊಟ್ಟಿದ್ದಾರೆ.

 
ಸಾಮಾನ್ಯವಾಗಿ ಪ್ರಧಾನಿ ಹುದ್ದೆಯಲ್ಲಿರುವವರು ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಬಂದರೆ ವಿಐಪಿ ಗ್ಯಾಲರಿಯಲ್ಲಿ ಕುಳಿತು ಕೆಲವು ಕಾಲ ಪಂದ್ಯ ವೀಕ್ಷಿಸಿ, ಪ್ರಶಸ್ತಿ ಪ್ರಧಾನ ಮಾಡಿ ತೆರಳುವುದು ವಾಡಿಕೆ. ಆದರೆ ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್ ಆಸೀಸ್ ಆಟಗಾರರಿಗೆ ನೀರು ಸರಬರಾಜು ಮಾಡುವ ಕೆಲಸ ಮಾಡಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಇಲೆವೆನ್ ಮತ್ತು ಶ್ರೀಲಂಕಾ ನಡುವೆ ನಡೆದ ಅಭ್ಯಾಸ ಪಂದ್ಯದಲ್ಲಿ ಈ ಘಟನೆ ನಡೆದಿದೆ.
 
12 ನೇ ಆಟಗಾರ ಮಾಡುವ ಪಾನೀಯ ಸರಬರಾಜು ಕೆಲಸ ಮಾಡಿದ ಪ್ರಧಾನಿ ಸ್ಕಾಟ್ ಸರಳತೆಗೆ ಟ್ವಿಟರ್ ಮೆಚ್ಚುಗೆಯ ಸುರಿಮಳೆಗೈದಿದೆ. ಅಬ್ಬಾ ಈ ಪ್ರಧಾನಿ ಎಷ್ಟು ಕೂಲ್ ಎಂದು ಭಾರತೀಯರೂ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :