ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾನ್ಯವಾಗಿ ಮೈದಾನದಲ್ಲಿ ಆಕ್ರಮಣಕಾರಿ ಸ್ವಭಾವ ಪ್ರದರ್ಶಿಸುತ್ತಾರೆ. ಆಡುವಾಗ, ಎದುರಾಳಿಗಳ ವಿಕೆಟ್ ಕಿತ್ತಾಗ ಪ್ರೇಕ್ಷಕರತ್ತ ವಿಚಿತ್ರ ಸನ್ನೆ ಮಾಡಿ ಘರ್ಜಿಸುತ್ತಾರೆ. ಒಂದು ವೇಳೆ ಅವರು ಖಾಲಿ ಮೈದಾನದಲ್ಲಿ ಆಡಿದರೆ ಹೇಗಿರಬಹುದು?ಆಸೀಸ್ ಕ್ರಿಕೆಟಿಗ ನಥನ್ ಲಿಯೋನ್ ಗೆ ಇಂತಹದ್ದೊಂದು ಕಲ್ಪನೆ ಬಂದಿದೆ. ಒಂದು ವೇಳೆ ಕೊಹ್ಲಿ ಖಾಲಿ ಮೈದಾನದಲ್ಲಿ ಆಡಿದರೆ ಹೇಗಿರಬಹುದು ಎಂದು ಅವರು ತಮಾಷೆಯಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.ನಾನು ನನ್ನ ಸಹ ಕ್ರಿಕೆಟಿಗನ ಜತೆ