ಮುಂಬೈ: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಮೂರು ಪಂದ್ಯಗಳಿಗೆ ವಿರಾಟ್ ಕೊಹ್ಲಿ ಗೈರಾಗಲಿರುವುದು ರೋಹಿತ್ ಶರ್ಮಾ ಪಾಲಿಗೆ ವರದಾನವಾಗಲಿದೆ. ಹೀಗಾಗಿ ಈ ಸರಣಿ ಒಂದು ರೀತಿಯಲ್ಲಿ ರೋಹಿತ್-ಕೊಹ್ಲಿ ಪೈಪೋಟಿಗೆ ಮತ್ತೊಂದು ವೇದಿಕೆಯಾಗಲಿದೆ. ಇಬ್ಬರಲ್ಲಿ ಯಾರು ನಾಯಕರಾಗಿ ಸೂಕ್ತ ಎಂಬ ಪ್ರಶ್ನೆಗೆ ಈ ಸರಣಿ ಉತ್ತರ ನೀಡಲಿದೆ. ಇದಕ್ಕೂ ಮೊದಲು ರೋಹಿತ್ ಸೀಮಿತ ಓವರ್ ಗಳಲ್ಲಿ ನಾಯಕರಾಗಿದ್ದರು. ಆದರೆ ಟೆಸ್ಟ್ ಪಂದ್ಯಗಳಿಗೆ ನಾಯಕರಾಗದೇ ಅವರ ನಾಯಕತ್ವವನ್ನು ರಾಷ್ಟ್ರೀಯ ತಂಡದಲ್ಲಿ ತೂಗುವುದು ಕಷ್ಟ.