ನವದೆಹಲಿ: ಕಳೆದ ಬಾರಿ ಆಸ್ಟ್ರೇಲಿಯಾ ಭಾರತ ಪ್ರವಾಸ ಮಾಡಿದಾಗ ಆಸ್ಟ್ರೇಲಿಯಾ ಪತ್ರಿಕೆಗಳು ವಿರಾಟ್ ಕೊಹ್ಲಿಯನ್ನು ಕೆಣಕಿದ್ದವು. ಇದೀಗ ಮತ್ತೆ ಕೊಹ್ಲಿಗೆ ಆಸೀಸ್ ಪತ್ರಕರ್ತರೊಬ್ಬರು ಅವಮಾನ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ವಿಶ್ವ ಇಲೆವೆನ್ ತಂಡದೊಂದಿಗಿನಿ ಟಿ20 ಸರಣಿಯ ಬಗ್ಗೆ ಮಾತನಾಡುತ್ತಾ ಆಸೀಸ್ ಪತ್ರಕರ್ತರೊಬ್ಬರು ತಮ್ಮ ಟ್ವಿಟರ್ ಪೇಜ್ ನಲ್ಲಿ ಕೊಹ್ಲಿ ಗದಾಫಿ ಮೈದಾನದಲ್ಲಿ ಕಸ ಗುಡಿಸುತ್ತಿರುವ ಫೋಟೋ ಪ್ರಕಟಿಸಿ ಸ್ವೀಪರ್ ಎಂದು ಕರೆದಿದ್ದಾರೆ.ವಿಶ್ವ ಇಲೆವೆನ್ ಪಂದ್ಯಕ್ಕೆ ಸ್ವೀಪರ್ ಕಸ ಗುಡಿಸುತ್ತಿದ್ದಾರೆ