ಪಾಕ್ ನೂತನ ನಾಯಕ ಬಾಬರ್ ಅಝಮ್ ಗೆ ವಿರಾಟ್ ಕೊಹ್ಲಿಯೇ ಆದರ್ಶ

ಇಸ್ಲಾಮಾಬಾದ್| Krishnaveni K| Last Modified ಶನಿವಾರ, 26 ಅಕ್ಟೋಬರ್ 2019 (10:00 IST)
ಇಸ್ಲಾಮಾಬಾದ್: ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗ ಬಾಬರ್ ಅಝಮ್ ಈಗ ಟಿ20 ತಂಡಕ್ಕೆ ನಾಯಕರಾಗಿದ್ದಾರೆ. ಸರ್ಫರಾಜ್ ಅಹಮ್ಮದ್ ರನ್ನು ನಾಯಕ ಸ್ಥಾನದಿಂದ ಕಿತ್ತೊಗೆದ ಪಾಕ್ ಕ್ರಿಕೆಟ್ ಮಂಡಳಿ ಬಾಬರ್ ಗೆ ಪಟ್ಟ ಕಟ್ಟಿದೆ.

 
ಆದರೆ ಬಾಬರ್ ಅಝಮ್ ತಮಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ನಾಯಕತ್ವ ಆದರ್ಶ ಎಂದಿದ್ದಾರೆ.
 
ಈ ಇಬ್ಬರು ಘಟಾನುಘಟಿ ನಾಯಕರಂತೇ ತಾನೂ ಹೆಸರು ಮಾಡಬೇಕು ಎಂದಿದ್ದಾರೆ. ಬ್ಯಾಟಿಂಗ್ ನಲ್ಲಿ ಬಾಬರ್ ರನ್ನು ಪಾಕಿಸ್ತಾನದ ವಿರಾಟ್ ಕೊಹ್ಲಿ ಎಂದೇ ಪರಿಗಣಿಸಲಾಗುತ್ತದೆ. ಆದರೆ ಬಾಬರ್ ಮಾತ್ರ ತನ್ನನ್ನು ಕೊಹ್ಲಿ ಜತೆ ಹೋಲಿಕೆ ಮಾಡಬೇಡಿ, ತನಗೆ ಅವರು ಆದರ್ಶ ಎನ್ನುತ್ತಿದ್ದರು.
ಇದರಲ್ಲಿ ಇನ್ನಷ್ಟು ಓದಿ :