ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಒಬ್ಬ ನಿಷ್ಕಳಂಕ ಕೋಚ್ ಆಗಿದ್ದರು ಎಂದು ಬಿಸಿಸಿಐ ಆಡಳಿತ ಮಂಡಳಿ ಮುಖ್ಯಸ್ಥ ವಿನೋದ್ ರೈ ಹೇಳಿದ್ದಾರೆ. ಕೋಚ್ ಆಗಿ ಅವರೊಬ್ಬ ನಿಷ್ಕಲ್ಮಶರಾಗಿದ್ದರು. ಅವರು ಭಾರತೀಯ ಕ್ರಿಕೆಟ್ ಗೆ ಒಳ್ಳೆಯದನ್ನೇ ಮಾಡಿದ್ದಾರೆ. 24 ಗಂಟೆಯೂ ಇಬ್ಬರು ಜತೆಗಿದ್ದಾರೆಂದರೆ ಅವರ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಅದೇ ರೀತಿ ಕೊಹ್ಲಿ-ಕುಂಬ್ಳೆ ನಡುವೆಯೂ ಆಗಿದೆ.ಯಾರಿಗೇ ಆದರೂ ಒಗ್ಗಟ್ಟು ಮುಖ್ಯ. ಅಂತಿಮವಾಗಿ ಮೈದಾನದಲ್ಲಿ ಹೋರಾಡುವುದು ನಾಯಕನೇ.