ಮುಂಬೈ: ಭಾರತ ಕ್ರಿಕೆಟ್ ತಂಡದಲ್ಲಿ ಈಗ ವಿರಾಟ್ ಕೊಹ್ಲಿಯದ್ದೇ ಫೈನಲ್ ಮಾತು, ಅವರು ಹೇಳಿದ್ದೇ ನಿರ್ಧಾರ ಎನ್ನುವುದು ರಹಸ್ಯವಾಗಿ ಉಳಿದಿಲ್ಲ. ಇದೀಗ ಬಿಸಿಸಿಐ ಮಾಜಿ ಅಧಿಕಾರಿಯೇ ಈ ವಿಷಯ ಬಹಿರಂಗಪಡಿಸಿದ್ದಾರೆ. ಬಿಸಿಸಿಐಗೂ ವಿರಾಟ್ ಕೊಹ್ಲಿ ಎಂದರೆ ಭಯ. ಅದಕ್ಕೇ ಅವರು ಹೇಳಿದ ಹಾಗೆ ಕೇಳುತ್ತಿದೆ. ಅವರನ್ನು ವಿರೋಧಿಸಲು ಭಯಪಡುತ್ತಿದೆ ಎಂದು ಸುಪ್ರೀಂ ಕೋರ್ಟ್ ನಿಯಮಿತ ಬಿಸಿಸಿಐ ಆಡಳಿತ ಮಂಡಳಿ ಸದಸ್ಯರಾಗಿದ್ದ ರಾಮಚಂದ್ರ ಗುಹಾ ಹೇಳಿದ್ದಾರೆ.ಅನಿಲ್ ಕುಂಬ್ಳೆ-ವಿರಾಟ್ ಕೊಹ್ಲಿ ವಿವಾದದ