ಮುಂಬೈ: ಹೊಸ ನೀರು ಬಂದಾಗ ಹಳೆ ನೀರು ಬೆಲೆ ಕಳೆದುಕೊಳ್ಳುತ್ತದೆ ಎನ್ನುವುದಕ್ಕೆ ಯುವರಾಜ್ ಸಿಂಗ್ ಲೇಟೆಸ್ಟ್ ಉದಾಹರಣೆ. ಹಲವು ವರ್ಷಗಳಿಂದ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಯುವಿ ಜಾಗವನ್ನು ತುಂಬುವಂತಹ ಯುವ ಪ್ರತಿಭೆಗಳ ಗಡಣವೇ ನಮ್ಮಲ್ಲಿದೆ. ಹೀಗಾಗಿ ನೀವು ಇದ್ದರಷ್ಟೇ ತಂಡ ಎನ್ನುವ ಪರಿಸ್ಥಿತಿಯಲ್ಲಿ ತಂಡವಿಲ್ಲ. ನಿಮ್ಮ ದಾರಿಯನ್ನು ನೀವು ನೋಡಿಕೊಳ್ಳಬಹುದು ಎಂದು ಆಯ್ಕೆಗಾರರು ಪರೋಕ್ಷವಾಗಿ ಯುವಿಗೆ ಸೂಚಿಸಿದ್ದಾರೆ.ಶ್ರೀಲಂಕಾ ವಿರುದ್ಧ ಸರಣಿಗೆ ಅವರನ್ನು ಆಯ್ಕೆ ಮಾಡದೇ ಇರುವುದಕ್ಕೆ ಯಾರೂ ವಿರೋಧ