ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಮೇಲೆ ಹೇರಲಾಗಿದ್ದ ನಿಷೇಧ ಶಿಕ್ಷೆಯನ್ನು ಬಿಸಿಸಿಐ ತೆರವುಗೊಳಿಸಿದೆ.ಇಬ್ಬರೂ ಕ್ರಿಕೆಟಿಗರ ವಿಚಾರಣೆಯನ್ನು ಸುಪ್ರೀಂಕೋರ್ಟ್ ಫೆಬ್ರವರಿ 5 ರಂದು ನಡೆಸಲು ತೀರ್ಮಾನಿಸಿದೆ. ಇದರ ಬೆನ್ನಲ್ಲೇ ಬಿಸಿಸಿಐ ಆಡಳಿತಾಧಿಕಾರಿಗಳು ಕ್ರಿಕೆಟಿಗರು ಯಾವುದೇ ಕ್ರಿಕೆಟ್ ಪಂದ್ಯವಾಡದಂತೆ ಹೇರಿದ್ದ ನಿಷೇಧ ತೆರವುಗೊಳಿಸಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ ವಿಚಾರಣೆ ಮುಗಿಯುವವರೆಗೆ ನಿಷೇಧ ತೆರವುಗೊಳಿಸಲಾಗಿದೆ. ಅದಾದ ಬಳಿಕ ಕೋರ್ಟ್ ತೀರ್ಪಿನಂತೆ