ಮುಂಬೈ: ಕೋಚ್ ಅನಿಲ್ ಕುಂಬ್ಳೆ ವೇತನ ಏರಿಸುವಂತೆ ಬೇಡಿಕೆ ಇಟ್ಟ ದಿನದಿಂದ ಅವರ ವಿರುದ್ಧ ಕಿಡಿ ಕಾರುತ್ತಿರುವ ಬಿಸಿಸಿಐ ಪದಾಧಿಕಾರಿಗಳು ಹೊಸದೊಂದು ಆರೋಪ ಹೊರಿಸಿದ್ದಾರೆ. ವಿರಾಟ್ ಕೊಹ್ಲಿಯನ್ನು ಮುಂದಿಟ್ಟುಕೊಂಡು ಕುಂಬ್ಳೆ ದುಪ್ಪಟ್ಟು ವೇತನಕ್ಕೆ ಬೇಡಿಕೆಯಿಡುತ್ತಿದ್ದಾರೆ ಎಂದು ಬಿಸಿಸಿಐಯ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ದೂರಿದ್ದಾರೆ. ಕೊಹ್ಲಿ ವೈಯಕ್ತಿಕವಾಗಿ ವೇತನ ಹೆಚ್ಚಿಸುವಂತೆ ಕೇಳಿಕೊಳ್ಳದಿದ್ದರೂ, ನಾಯಕನ ವೇತನ ಹೆಚ್ಚಿಸಬೇಕೆಂದು ಕುಂಬ್ಳೆ ಬಿಸಿಸಿಐ ಎದುರು ವಿಷಯ ಮಂಡನೆ ಮಾಡುವಾಗ ಆಗ್ರಹಿಸಿದ್ದರು ಎಂದು ಅವರು ದೂರಿದ್ದಾರೆ.ನಾನು