ಮುಂಬೈ: ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐನಿಂದ ನಿಷೇಧಕ್ಕೊಳಗಾಗಿದ್ದ ಕೇರಳ ಮೂಲದ ಟೀಂ ಇಂಡಿಯಾ ಮಾಜಿ ವೇಗಿ ಎಸ್ ಶ್ರೀಶಾಂತ್ ಗೆ ಸ್ವತಂತ್ರ ತನಿಖಾಧಿಕಾರಿ ಡಿಕೆ ಜೈನ್ ಜೀವದಾನ ನೀಡಿದ್ದಾರೆ.ಕೇರಳ ವೇಗಿ ವಿರುದ್ಧ ಬಿಸಿಸಿಐ ಈ ಮೊದಲು ಹೇರಿದ್ದ ಜೀವಪರ್ಯಂತ ನಿಷೇಧ ನಿರ್ಧಾರವನ್ನು ಹಿಂಪಡೆಯುವಂತೆ ಸುಪ್ರೀಂಕೋರ್ಟ್ ಈ ಮೊದಲು ಆದೇಶಿಸಿತ್ತು. ಅದರಂತೆ ಈಗ ಸುಪ್ರೀಂಕೋರ್ಟ್ ನಿಯಮಿತ ತನಿಖಾಧಿಕಾರಿ ಡಿಕೆ ಜೈನ್ ಶ್ರೀಶಾಂತ್ ಮೇಲಿನ ನಿಷೇಧವನ್ನು ಏಳು ವರ್ಷಕ್ಕೆ ಕಡಿತಗೊಳಿಸಿ