Widgets Magazine

ರಾಹುಲ್ ದ್ರಾವಿಡ್ ಎಲ್ಲಿ? ರವಿಶಾಸ್ತ್ರಿ ಎಲ್ಲಿ? ಹೋಲಿಕೆ ಮಾಡಿದ ಬಿಸಿಸಿಐಗೆ ನೆಟ್ಟಿಗರ ತರಾಟೆ

ಬೆಂಗಳೂರು| Krishnaveni K| Last Modified ಭಾನುವಾರ, 22 ಸೆಪ್ಟಂಬರ್ 2019 (09:11 IST)
ಬೆಂಗಳೂರು: ಟೀಂ ಇಂಡಿಯಾದ ಸರ್ವಕಾಲಿಕ ಬೆಸ್ಟ್ ಬ್ಯಾಟ್ಸ್ ಮನ್ ರಾಹುಲ್ ದ್ರಾವಿಡ್ ಜತೆಗೆ ರವಿಶಾಸ್ತ್ರಿಯನ್ನು ಹೋಲಿಕೆ ಮಾಡಿ ದಿಗ್ಗಜರು ಎಂದು ಕರೆದ ಬಿಸಿಸಿಐಯನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

 
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಟೀಂ ಇಂಡಿಯಾ ಸದಸ್ಯರನ್ನು ದ್ರಾವಿಡ್ ಭೇಟಿ ಮಾಡಲು ಬಂದಿದ್ದರು. ಈ ಸಂದರ್ಭದಲ್ಲಿ ಕೋಚ್ ರವಿಶಾಸ್ತ್ರಿ ಜತೆ ಮಾತನಾಡುವ ಕ್ಷಣಗಳ ಫೋಟೋ ಟ್ವಿಟರ್ ನಲ್ಲಿ ಪ್ರಕಟಿಸಿದ ಇಬ್ಬರು ದಿಗ್ಗಜರು ಭೇಟಿಯಾದಾಗ ಎಂದು ಬರೆದುಕೊಂಡಿತ್ತು.
 
ಇದನ್ನು ನೋಡಿದ ಅಭಿಮಾನಿಗಳು ರಾಹುಲ್ ದ್ರಾವಿಡ್ ಗೆ ರವಿಶಾಸ್ತ್ರಿ ಸಮವೇ ಅಲ್ಲ ಎಂದು ಕಿಡಿ ಕಾರಿದ್ದಾರೆ. ಭಾರತ ಕ್ರಿಕೆಟ್ ಗೆ ಒಬ್ಬರೇ ದಿಗ್ಗಜ ವಾಲ್. ಅವರನ್ನು ಬೇರೆಯವರಿಗೆ ಹೋಲಿಸಬೇಡಿ ಎಂದು ಕೆಲವರು ಕಿಡಿ ಕಾರಿದ್ದರೆ ಮತ್ತೆ ಕೆಲವರು ರವಿಶಾಸ್ತ್ರಿಯನ್ನು ಕುಡುಕ ಎಂದೂ ಅವಹೇಳನ ಮಾಡಿದ್ದಾರೆ. ಹೆಚ್ಚಿನವರು ಇನ್ನೊಬ್ಬ ಗ್ರೇಟ್ ಎಲ್ಲಿ? ನಮಗೆ ದ್ರಾವಿಡ್ ಮಾತ್ರ ಕಾಣಿಸುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :