ಜೊಹಾನ್ಸ್ ಬರ್ಗ್: ದ.ಆಫ್ರಿಕಾ ಮತ್ತು ಭಾರತ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಅತಿಥೇಯರು ಮೊದಲು ಬ್ಯಾಟಿಂಗ್ ಆರಂಭಿಸಿದ್ದಾರೆ. ಆದರೆ ಭಾರತ ತಂಡದಲ್ಲಿ ಅಚ್ಚರಿಯೆಂಬಂತೆ ಕಳೆದ ಪಂದ್ಯದ ಹೀರೋ ಭುವನೇಶ್ವರ್ ಕುಮಾರ್ ರನ್ನು ಹೊರಗಿಡಲಾಗಿದೆ. ಭುವನೇಶ್ವರ್ ಕುಮಾರ್ ರನ್ನು ಹೊರಗಿಟ್ಟು ಹಿರಿಯ ವೇಗಿ ಇಶಾಂತ್ ಶರ್ಮಾಗೆ ಮಣೆ ಹಾಕಲಾಗಿದೆ. ಇದಕ್ಕೆ ಕಾರಣ ಈ ಪಿಚ್ ನಲ್ಲಿರುವ ಬೌನ್ಸ್. ಇಶಾಂತ್ ನೀಳಕಾಯದವರಾಗಿರುವುದರಿಂದ ಅವರ ಬಾಲ್ ನಲ್ಲಿ ಬೌನ್ಸ್