ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸಂಜನಾ ಮದುವೆ ಸುದ್ದಿ ತಿಳಿಯುತ್ತಿದ್ದ ಹಾಗೆ, ಈಗ ಮತ್ತೊಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅದೇನೆಂದರೆ, ಬಿಗ್ ಬಾಸ್ ನ ಸ್ಪರ್ಧಿಯಾಗಿದ್ದ ಕ್ರಿಕೆಟಿಗ ಅಯ್ಯಪ್ಪಗೂ ಕಂಕಣ ಭಾಗ್ಯ ಕೂಡಿ ಬಂದಿದೆಯಂತೆ. ಸ್ಯಾಂಡಲ್ ವುಡ್ ನಲ್ಲಿ ಕರ್ವ, ಪಾನೀಪುರಿ, ಲೈಪು ಸೂಪರ್, ಕಥಾವಿಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅನು ಚಿನ್ನಪ್ಪರವರನ್ನು ಅಯ್ಯಪ್ಪ ಮದುವೆಯಾಗಲಿದ್ದಾರೆ. ಬೆಳ್ಳಿತೆರೆಯ ಖ್ಯಾತ ನಟಿ ಪ್ರೇಮ ಅವರ ಸಹೋದರನಾದ ಅಯ್ಯಪ್ಪ ಅವರು ಬಿಗ್