Widgets Magazine

ದೇಶ ಕಾಯಲು ಹೊರಟ ಧೋನಿಯನ್ನೇ ಕಾಯಬೇಕಾಗುತ್ತದೆಯೇ?!

ನವದೆಹಲಿ| Krishnaveni K| Last Modified ಶನಿವಾರ, 27 ಜುಲೈ 2019 (09:39 IST)
ನವದೆಹಲಿ: ಎರಡು ತಿಂಗಳುಗಳ ಕಾಲ ಕ್ರಿಕೆಟ್ ಬಿಟ್ಟು, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಹೊರಟಿರುವ ಕ್ರಿಕೆಟಿಗ ಧೋನಿ ದೇಶ ಕಾಯುವಾಗ ಅವರನ್ನೇ ಕಾಯುವ ಪರಿಸ್ಥಿತಿ ಎದುರಾಗಲಿದೆಯೇ?

 
ಹೇಳಿ ಕೇಳಿ ಧೋನಿ ದೇಶದ ವಿಐಪಿಗಳಲ್ಲೊಬ್ಬರು. ಅವರು ಸಾಮಾನ್ಯವಾಗಿ ದೇಶದ ಯಾವುದೇ ಭಾಗದಲ್ಲಿ ಸಂಚರಿಸುವಾಗ ಅಭಿಮಾನಿಗಳ ಕಾಟ ಇದ್ದೇ ಇರುತ್ತದೆ. ಹೀಗಾಗಿ ಫುಲ್ ಭದ್ರತೆಯಲ್ಲೇ ಸಾಗುತ್ತಾರೆ.
 
ಇಂತಿಪ್ಪ ಧೋನಿ ಗಡಿಯಲ್ಲಿ ಇತರ ಯೋಧರೊಂದಿಗೆ ದೇಶ ಕಾಯುವಾಗ ಅವರನ್ನೇ ಕಾಯುವ ಪರಿಸ್ಥಿತಿ ಎದುರಾಗಲಿದೆಯೇ? ಹೀಗೊಂದು ಪ್ರಶ್ನೆಯನ್ನು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಬಳಿ ಕೇಳಲಾಯ್ತು. ಇದಕ್ಕೆ ಉತ್ತರಿಸಿರುವ ಅವರು ‘ಖಂಡಿತಾ ಇಲ್ಲ. ಧೋನಿಗೆ ಸಾಮಾನ್ಯ ತರಬೇತಿ ನೀಡಿಯೇ ಪ್ಯಾರಾ ಬೆಟಾಲಿಯನ್ ಗೆ ಕರ್ತವ್ಯಕ್ಕೆ ಕಳುಹಿಸಲಾಗುತ್ತಿದೆ. ಅವರನ್ನು ಕಾಯಬೇಕಾಗಲ್ಲ. ಅವರೇ ಇತರ ನಾಗರಿಕರನ್ನು ಕಾಯಲಿದ್ದಾರೆ’ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :