ರವಿಚಂದ್ರನ್ ಅಶ್ವಿನ್ ರ ಒಂದೇ ದಾಖಲೆ ಮುರಿಯಲು ಚಾಹಲ್-ಬುಮ್ರಾ ನಡುವೆ ಪೈಪೋಟಿ

ಗುವಾಹಟಿ| Krishnaveni K| Last Modified ಭಾನುವಾರ, 5 ಜನವರಿ 2020 (09:15 IST)
ಗುವಾಹಟಿ: ಭಾರತ ಮತ್ತು ಶ್ರೀಲಂಕಾ ನಡುವೆ ಇಂದಿನಿಂದ ಆರಂಭವಾಗಲಿರುವ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ರ ದಾಖಲೆಯೊಂದನ್ನು ಮುರಿಯಲು ಟೀಂ ಇಂಡಿಯಾದ ಇಬ್ಬರು ಬೌಲರ್ ಗಳು ಪೈಪೋಟಿಯಲ್ಲಿದ್ದಾರೆ.

 
ರವಿಚಂದ್ರನ್ ಅಶ್ವಿನ್ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿದ ಭಾರತೀಯ ಬೌಲರ್ ಗಳ ಪೈಕಿ ಮೊದಲಿಗರಾಗಿದ್ದಾರೆ. 52 ವಿಕೆಟ್ ಪಡೆದಿರುವ ಅಶ್ವಿನ್ ದಾಖಲೆಯನ್ನು ಕಳೆದ ಪಂದ್ಯದಲ್ಲಿ ಯಜುವೇಂದ್ರ ಚಾಹಲ್ ಸರಿಗಟ್ಟಿದ್ದರು.
 
ಆದರೆ ಬಹಳ ದಿನಗಳ ನಂತರ ತಂಡಕ್ಕೆ ಮರಳಿರುವ ವೇಗಿ ಜಸ್ಪ್ರೀತ್ ಬುಮ್ರಾ ಕೂಡಾ 51 ವಿಕೆಟ್ ಕಬಳಿಸಿದ್ದು, ಇನ್ನು ಎರಡು ವಿಕೆಟ್ ಪಡೆದರೆ ಅಶ್ವಿನ್ ದಾಖಲೆ ಮುರಿಯಲಿದ್ದಾರೆ. ಹೀಗಾಗಿ ಚಾಹಲ್ ಗೆ ಅಶ್ವಿನ್ ದಾಖಲೆ ಮುರಿಯಲು 1 ವಿಕೆಟ್ ಬೇಕಾದರೆ ಬುಮ್ರಾಗೆ 2 ವಿಕೆಟ್ ಬೇಕಾಗಿದೆ. ಈ ಪೈಪೋಟಿಯಲ್ಲಿ ಗೆಲ್ಲುವವರು ಯಾರು ನೋಡಬೇಕಿದೆ.
ಇದರಲ್ಲಿ ಇನ್ನಷ್ಟು ಓದಿ :