ಕೊರೋನಾ ಪೀಡಿತ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಸ್ಥಿತಿ ಗಂಭೀರ

ಮುಂಬೈ| Krishnaveni K| Last Modified ಭಾನುವಾರ, 16 ಆಗಸ್ಟ್ 2020 (10:52 IST)
ಮುಂಬೈ: ಕೊರೋನಾ ಸೋಂಕಿತರಾಗಿರುವ ಮಾಜಿ ಟೀಂ ಇಂಡಿಯಾ ಕ್ರಿಕೆಟಿಗ ಚೇತನ್ ಚೌಹಾಣ್ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
 

ಗುರುಗಾಂವ್ ನ ಆಸ್ಪತ್ರೆಗೆ ದಾಖಲಾಗಿರುವ ಚೇತನ್ ಗೆ ಇದೀಗ ಜೀವ ರಕ್ಷಕ ಅಳವಡಿಸಲಾಗಿದೆ. ಅವರೀಗ ಕಿಡ್ನಿ ವೈಫಲ್ಯ ಹಾಗೂ ಅಧಿಕ ರಕ್ತದೊತ್ತಡದಿಂದಲೂ ಬಳಲುತ್ತಿದ್ದಾರೆ.
 
ಕಳೆದ ತಿಂಗಳೇ ಅವರಿಗೆ ಕೊರೋನಾ ಇರುವುದು ಖಚಿತವಾಗಿತ್ತು. 72 ವಯಸ್ಸಿನ ಚೇತನ್ ಕುಟುಂಬದವರನ್ನೂ ಕ್ವಾರಂಟೈನ್ ಗೊಳಪಡಿಸಲಾಗಿದೆ.




ಇದರಲ್ಲಿ ಇನ್ನಷ್ಟು ಓದಿ :