Widgets Magazine

ರಣಜಿ ಟ್ರೋಫಿ: ವಿನಯ್ ಕುಮಾರ್ ಔಟ್ ಮಾಡಲು ಚೇತೇಶ್ವರ ಪೂಜಾರ ಟ್ರಿಕ್!

ಬೆಂಗಳೂರು| Krishnaveni K| Last Modified ಭಾನುವಾರ, 27 ಜನವರಿ 2019 (09:03 IST)
ಬೆಂಗಳೂರು: ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಸೌರಾಷ್ಟ್ರ ವಿರುದ್ಧ ಕರ್ನಾಟಕ ಬ್ಯಾಟ್ಸ್ ಮನ್ ವಿನಯ್ ಕುಮಾರ್ ರನ್ನು ದ್ವಿತೀಯ ಇನಿಂಗ್ಸ್ ನಲ್ಲಿ ಔಟ್ ಮಾಡಲು ಬೌಲರ್ ಜಯದೇವ್ ಉನಾದ್ಕಟ್ ಗೆ ನೆರವಾದರು.

 
12 ಗಳಿಸಿದ್ದ ವಿನಯ್ ಕುಮಾರ್ ರನ್ನು ಔಟ್ ಮಾಡಲು ಪೂಜಾರ ಬೌಲರ್ ಉನಾದ್ಕಟ್ ಗೆ ಸಲಹೆ ನೀಡಿದ್ದಾರೆ. ಪೂರ್ವ ಎಸೆತದಲ್ಲಿ ಬೌಂಡರಿ ಬಾರಿಸಿದ್ದ ವಿನಯ್ ಕುಮಾರ್ ಗೆ ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೇಕ್ಷಕರು ಜೈಕಾರ ಹಾಕಿದ್ದರು.
 
ಈ ವೇಳೆ ಬೌಲರ್ ಉನಾದ್ಕಟ್ ಜತೆ ಸ್ವಲ್ಪ ಹೊತ್ತು ಮಾತುಕತೆ ನಡೆಸಿದ ಪೂಜಾರ ವಿನಯ್ ವಿಕೆಟ್ ಕೀಳಲು ಸಲಹೆ ನೀಡಿದರು. ಅವರು ಏನು ಸಲಹೆ ನೀಡಿದರು ಎಂಬುದು ಬಹಿರಂಗವಾಗಿಲ್ಲ. ಆದರೆ ಅದೇನೇ ಇದ್ದರೂ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಕೂಡಾ ಆಗಿರುವ ಸೌರಾಷ್ಟ್ರದ ಪೂಜಾರ ಸಲಹೆ ನೀಡಿದ ಮರು ಎಸೆತದಲ್ಲೇ ವಿನಯ್ ವಿಕೆಟ್ ಬಿತ್ತು!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :