ಗ್ರಹಚಾರ ಕೆಟ್ಟು ಕೂತಿರುವ ಕೆಎಲ್ ರಾಹುಲ್ ಮುಖ್ಯ ಆಯ್ಕೆಗಾರ ಎಂಎಸ್ ಕೆ ಪ್ರಸಾದ್ ವರ!

ಮುಂಬೈ, ಶನಿವಾರ, 9 ಫೆಬ್ರವರಿ 2019 (08:58 IST)

ಮುಂಬೈ: ಒಂದೆಡೆ ಕಳಪೆ ಫಾರ್ಮ್ ಇನ್ನೊಂದೆಡೆ ಕಾಫಿ ವಿತ್ ಕರಣ್ ಶೋ ವಿವಾದ.. ಇದೆಲ್ಲದವರಿಂದ ಹೈರಾಣಾಗಿರುವ ಕ್ರಿಕೆಟಿಗ ಕೆಎಲ್ ರಾಹುಲ್ ಗೆ ಇದೀಗ ಟೀಂ ಇಂಡಿಯಾ ಆಯ್ಕೆಗಾರರ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಬೆಂಬಲ ಸಿಕ್ಕಿದೆ.


 
ರಾಹುಲ್ ಕಳಪೆ ಫಾರ್ಮ್ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಸಾದ್, ಇದು ಎಲ್ಲಾ ಕ್ರಿಕೆಟಿಗರ ಜೀವನದಲ್ಲೂ ಆಗುವಂತದ್ದೇ ಎಂದು ರಾಹುಲ್ ವಾಪಸಾತಿಯನ್ನು ಬೆಂಬಲಿಸಿ ಮಾತನಾಡಿದ್ದಾರೆ.
 
‘ಘಟಾನುಘಟಿ ಆಟಗಾರರೂ ವೃತ್ತಿ ಜೀವನದಲ್ಲಿ ಇಂತಹ ರನ್ ಬರಗಾಲ ಎದುರಿಸುತ್ತಾರೆ. ಅದೇ ಕಾರಣಕ್ಕೆ ರಾಹುಲ್ ರನ್ನು ನಾವು ಇಂಗ್ಲೆಂಡ್ ಲಯನ್ಸ್ ವಿರುದ್ಧ ಎ ತಂಡಕ್ಕೆ ಆಯ್ಕೆ ಮಾಡಿದ್ದೇವೆ. ಸದ್ಯಕ್ಕೆ ರಾಹುಲ್ ಗೆ ನಾವು ಬೆಂಬಲ ನೀಡಬೇಕಿದೆ. ಅದನ್ನೇ ನಾವೀಗ ಮಾಡುತ್ತಿದ್ದೇವೆ. ಅವರು ಮರಳಿ ಲಯಕ್ಕೆ ಬರುತ್ತಾರೆ ಎನ್ನುವ ವಿಶ್ವಾಸವಿದೆ’ ಎಂದು ಪ್ರಸಾದ್ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭಾರತ-ನ್ಯೂಜಿಲೆಂಡ್ ಟಿ20: ಮಾತು ಉಳಿಸಿಕೊಂಡ ರೋಹಿತ್ ಶರ್ಮಾ

ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟಿ20 ಪಂದ್ಯವನ್ನು ಟೀಂ ಇಂಡಿಯಾ 7 ವಿಕೆಟ್ ಗಳಿಂದ ...

news

ಭಾರತ-ನ್ಯೂಜಿಲೆಂಡ್ ಟಿ20: ನಡುವೆ ನಿಯಂತ್ರಣ ತಪ್ಪಿದ ಟೀಂ ಇಂಡಿಯಾ ಬೌಲಿಂಗ್

ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ...

news

ಭಾರತ-ನ್ಯೂಜಿಲೆಂಡ್ ಟಿ20: ದ್ವಿತೀಯ ಪಂದ್ಯಕ್ಕೂ ಬದಲಾಗದ ಟೀಂ ಇಂಡಿಯಾ

ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್‍ ...

news

ಖಾಸಗಿ ಶೋನಲ್ಲಿ ಹೋದ ಮಾನ ಮರಳಿ ಪಡೆಯಲು ಕೆಎಲ್ ರಾಹುಲ್ ಮಾಡಿದ್ದಾರೆ ಈ ಸಾಹಸ!

ಬೆಂಗಳೂರು: ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿದ್ದಕ್ಕೆ ಹಾರ್ದಿಕ್ ಪಾಂಡ್ಯ ...