ವೆಸ್ಟ್ ಇಂಡೀಸ್ ಎರಡು ಬಾರಿ ವಿಶ್ವ ಟಿ 20 ವಿಜೇತ ನಾಯಕ ಡ್ಯಾರೆನ್ ಸಾಮಿ ತಮ್ಮ ತಂಡದ ಸಹಆಟಗಾರ ಕ್ರಿಸ್ ಗೇಲ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. 36 ವರ್ಷದ ಗೇಲ್ ಆಸ್ಟ್ರೇಲಿಯಾದ ನಿರೂಪಕಿ ಮೆಲ್ ಮೆಕ್ ಲಾಫ್ಲಿನ್ ಅವರನ್ನು ಲೈವ್ ಟಿವಿ ಸಂದರ್ಶನದಲ್ಲಿ ಡೇಟಿಂಗ್ಗೆ ಬರುವಂತೆ ಕೇಳಿದ್ದು ವಿವಾದಕ್ಕೆ ಎಡೆ ಕಲ್ಪಿಸಿತ್ತು.