ಮುಂಬೈ: ಟಿವಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುವಾಗ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಸಂದರ್ಶನದಲ್ಲಿ ಶಾಸ್ತ್ರಿ ನಾವು ಟೈಮ್ ಪಾಸ್ ಗಾಗಿ ಆಡುತ್ತಿಲ್ಲ. ನಮ್ಮ ಈಗಿನ ತಂಡದಲ್ಲಿ ಲೆಕ್ಕ ಭರ್ತಿಗೆ ಆಡುವ ಆಟಗಾರರಿಲ್ಲ ಎಂದು ರವಿಶಾಸ್ತ್ರಿ ಹೇಳಿರುವುದು ಸಂಶಯಗಳಿಗೆ ಕಾರಣವಾಗಿದೆ.ಈ ಹೇಳಿಕೆಗೆ ಇದೀಗ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಹಾಗಿದ್ದರೆ ಇದುವರೆಗೆ ಸಚಿನ್, ದ್ರಾವಿಡ್, ಗಂಗೂಲಿಯಂತಹ ಮಹಾನ್ ಆಟಗಾರರಿದ್ದ ತಂಡ ವ್ಯರ್ಥ ತಂಡವಾಗಿತ್ತೇ ಎಂದು