ಮುಂಬೈ: ಐಪಿಎಲ್ ಪಂದ್ಯ ಮುಗಿದ ತಕ್ಷಣ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ನಡೆಯಲಿದೆ. ಇದಕ್ಕಾಗಿ ನಾಳೆಯೊಳಗೆ ಟೀಂ ಇಂಡಿಯಾ ಆಯ್ಕೆ ನಡೆಯಬೇಕಿದೆ. ಹೀಗಾಗಿ ಯಾರು ತಂಡದಲ್ಲಿ ಉಳಿಯುತ್ತಾರೆ ಎನ್ನುವ ಕುತೂಹಲ ಪ್ರಾರಂಭವಾಗಿದೆ. ಐಸಿಸಿ ಎಲ್ಲಾ ತಂಡಗಳಿಗೆ ತಮ್ಮ ಆಟಗಾರರನ್ನು ಆಯ್ಕೆ ಮಾಡಲು ನಾಳೆಯವರೆಗೆ ಕಾಲಾವಕಾಶ ನೀಡಿದೆ. ಟೀಂ ಇಂಡಿಯಾದಲ್ಲಿ ಈಗ ಎಲ್ಲಕ್ಕಿಂತ ಹೆಚ್ಚು ವೇಗಿಗಳ ಆಯ್ಕೆಯೇ ಆಯ್ಕೆಗಾರರಿಗೆ ತಲೆ ನೋವಾಗಲಿದೆ. ಮೊಹಮ್ಮದ್ ಶಮಿ ಚೇತರಿಸಿಕೊಂಡಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಹಿರಿಯ ವೇಗಿ