Widgets Magazine

ಶಿಖರ್ ಧವನ್ ಕೈಲಿ ಬಟ್ಟೆ ಒಗೆಸಿದ ಪತ್ನಿ: ಎಲ್ಲಾ ಕೊರೋನಾ ಮಹಿಮೆ!

ನವದೆಹಲಿ| Krishnaveni K| Last Modified ಗುರುವಾರ, 26 ಮಾರ್ಚ್ 2020 (10:18 IST)
ನವದೆಹಲಿ: ಕೊರೋನಾವೈರಸ್ ನಿಂದಾಗಿ ತಾರೆಗಳು ಮನೆಯಲ್ಲೇ ಕೂತು ಇದುವರೆಗೆ ಮಾಡದ ಕೆಲಸ ಮಾಡುವಂತಾಗಿದೆ. ಇದೀಗ ಕ್ರಿಕೆಟಿಗ ಶಿಖರ್ ಧವನ್ ಬಟ್ಟೆ ಒಗೆದು ಟ್ರೋಲ್ ಗೊಳಗಾಗಿದ್ದಾರೆ.

 
ತಮ್ಮ ಟ್ವಿಟರ್ ಪೇಜ್ ನಲ್ಲಿ ಪತ್ನಿ ಆಯೆಷಾ ಮೇಕಪ್ ಮಾಡುತ್ತಾ ತಮ್ಮ ಕೈಲಿ ಬಟ್ಟೆ ಒಗೆಸುತ್ತಿರುವ ವಿಡಿಯೋವನ್ನು ಧವನ್ ಶೇರ್ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಮಾತ್ರವಲ್ಲದೆ, ಸೆಲೆಬ್ರಿಟಿಗಳೂ ಧವನ್ ರನ್ನು ಟ್ರೋಲ್ ಮಾಡಿದ್ದಾರೆ.
 
ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಸೇರಿದಂತೆ ಸರಿಯಾಗಿಯೇ ವರ್ಕ್ ಫ್ರಂ ಹೋಂ ಮಾಡ್ತಿದ್ದೀಯಾ ಎಂದು ಕಾಲೆಳೆದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :