Widgets Magazine

ರೋಹಿತ್ ಶರ್ಮಾ ಆಸ್ಟ್ರೇಲಿಯಾ ಪ್ರವಾಸಕ್ಕೆ ಅಡ್ಡಿಯಾಗಿರುವುದು ಫಿಟ್ನೆಸ್ ಸಮಸ್ಯೆ ಅಲ್ಲ! ಅಸಲಿ ಕಾರಣ ಬೇರೆಯೇ ಇದೆ!

ಸಿಡ್ನಿ| Krishnaveni K| Last Modified ಬುಧವಾರ, 25 ನವೆಂಬರ್ 2020 (10:08 IST)
ಸಿಡ್ನಿ: ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಗೈರು ಹಾಜರಾಗಲಿದ್ದಾರೆ.
 

ಎರಡು ಟೆಸ್ಟ್ ಬಳಿಕವೂ ರೋಹಿತ್ ತಂಡವನ್ನು ಕೂಡಿಕೊಳ್ಳಲು ಅಡ್ಡಿಯಾಗಿರುವುದು ಫಿಟ್ನೆಸ್ ಅಲ್ಲ. ಆಸ್ಟ್ರೇಲಿಯಾದ ಕೊರೋನಾ ನಿಯಮಾವಳಿ. ವಿದೇಶೀ ಪ್ರವಾಸಿಗರು ಎರಡು ವಾರಗಳ ಕಾಲ ಕಡ್ಡಾಯ ಕ್ವಾರಂಟೈನ್ ಗೊಳಗಾಗಬೇಕು ಎಂಬ ಆಸ್ಟ್ರೇಲಿಯಾ ಸರ್ಕಾರದ ನಿಯಮ ಈಗ ರೋಹಿತ್ ಗೆ ಅಡ್ಡಿಯಾಗಿದೆ. ಇದಕ್ಕಾಗಿ ರೋಹಿತ್ ಮತ್ತು ಇಶಾಂತ್ ರನ್ನು ಹೇಗಾದರೂ ತಂಡಕ್ಕೆ ಸೇರಿಸಲು ಬಿಸಿಸಿಐ ಶತಾಯಗತಾಯ ಪ್ರಯತ್ನ ನಡೆಸಿದೆ. ಅದಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಜತೆ ಸೇರಿಕೊಂಡು ಅಲ್ಲಿನ ಸರ್ಕಾರದ ಜತೆ ಮಾತನಾಡಿ ಇಬ್ಬರಿಗೆ ವಿನಾಯಿತಿ ನೀಡಲು ಪ್ರಯತ್ನ ನಡೆಸುತ್ತಿದೆ. ಒಂದು ವೇಳೆ ಈ ಪ್ರಯತ್ನದಲ್ಲಿ ಯಶಸ್ವಿಯಾದರೆ ಮಾತ್ರ ರೋಹಿತ್ ಗೆ ಉಳಿದ ಟೆಸ್ಟ್ ಪಂದ್ಯಗಳಲ್ಲಿ ಭಾಗಿಯಾಗಲು ಸಾಧ‍್ಯವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :