ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್ ನ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ಕಾರಣ ವಿಂಡೀಸ್ ಕ್ರಿಕೆಟಿಗ ಕಿರನ್ ಪೊಲ್ಲಾರ್ಡ್ ನಿಕಟವರ್ತಿಯಾಗಿದ್ದಾರೆ. ಕಿರನ್ ತನ್ನ ಸಹೋದರನಂತೆ ಎಂದು ಹೇಳಿಕೊಳ್ಳುವ ಹಾರ್ದಿಕ್ ಇದೇ ವಿಂಡೀಸ್ ಕ್ರಿಕೆಟಿಗನ ದೆಸೆಯಿಂದ ವಿಂಡೀಸ್ ಪ್ರವಾಸಕ್ಕೆ ಹೋಗಿದ್ದಾಗ ಅರೆಸ್ಟ್ ಆಗುವುದರಲ್ಲಿದ್ದರಂತೆ. ಪೊಲೀಸ್ ಅಧಿಕಾರಿಯೊಬ್ಬ ಹಾರ್ದಿಕ್ ನೊಂದಿಗೆ ವಾಗ್ವಾದ ನಡೆಸಿ ಕೊನೆಗೆ ಅರೆಸ್ಟ್ ಮಾಡಲು ಮುಂದಾಗಿದ್ದರಂತೆ.ಆದರೆ ತಾನು ಯಾವುದೇ ತಪ್ಪು ಮಾಡಿರಲಿಲ್ಲ.