ಮುಂಬೈ: ಕೊರೋನಾ ಎರಡನೇ ಅಲೆ ಯಾಕೋ ಸೆಲೆಬ್ರಿಟಿಗಳನ್ನೇ ಗುರಿಯಾಗಿಸಿದಂತಿದೆ. ಇದೀಗ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಕೊರೋನಾ ಸೋಂಕಿಗೊಳಗಾಗಿದ್ದಾರೆ ಎಂದು ವರದಿಯಾಗಿದೆ. ಟಿ20 ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಸದ್ಯಕ್ಕೆ ತಮ್ಮ ಪಟಿಯಾಲದ ಮನೆಯಲ್ಲಿ ಹೋಂ ಕ್ವಾರಂಟೈನ್ ಗೊಳಗಾಗಿದ್ದಾರೆ ಎನ್ನಲಾಗಿದೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಇತ್ತೀಚೆಗೆ ದ.ಆಫ್ರಿಕಾ ವಿರುದ್ಧ ನಡೆದ ಟಿ20 ಸರಣಿಯಲ್ಲೂ ಹರ್ಮನ್ ಭಾಗಿಯಾಗಿರಲಿಲ್ಲ. ಮಾರ್ಚ್ 17 ರಂದು ಏಕದಿನ ಪಂದ್ಯವಾಡಿದ್ದೇ ಕೊನೆ.