ನವದೆಹಲಿ: ಕೆಲವು ದಿನಗಳ ಹಿಂದೆ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬ ಜಡೇಜಾ ಸಮೇತರಾಗಿ ಪ್ರಧಾನಿ ಮೋದಿ ಭೇಟಿಯಾಗಿದ್ದರ ಹಿಂದಿನ ಸಂಭಾವ್ಯ ಕಾರಣ ಇದೀಗ ಬಯಲಾಗಿದೆ.ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವ ಬೆನ್ನಲ್ಲೇ ಜಡೇಜಾ ಪತ್ನಿ ರಿವಾಬ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಹುಶಃ ಪಕ್ಷಕ್ಕೆ ಸೇರ್ಪಡೆಯಾಗುವ ಮೊದಲು ಪ್ರಧಾನಿ ಮೋದಿಯನ್ನು ಭೇಟಿಯಾಗಿ ರಿವಾಬ ಮತ್ತು ಪತಿ ರವೀಂದ್ರ ಜಡೇಜಾ ಈ ಬಗ್ಗೆ ಚರ್ಚಿಸಿರಬಹುದು.ಕರ್ಣಿ ಸೇನಾ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದ ರಿವಾಬ ಈಗ