ದುಬೈ: ಕೊರೋನಾ ಭಯದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಗಳು ನಡೆಯುತ್ತಿದ್ದರೂ ಅದಕ್ಕಾಗಿ ಆಯೋಜಕರು ಕೈಗೊಳ್ಳುತ್ತಿರುವ ಜೈವಿಕ ಸುರಕ್ಷಾ ವಲಯವೆಂಬ ಕೋಟೆ ಸೆರೆಮನೆಯಂತಾಗಿದೆ. ಅಷ್ಟಕ್ಕೂ ಜೈವಿಕ ಸುರಕ್ಷಾ ವಲಯ ಕ್ರಿಕೆಟಿಗರಿಗೆ ಯಾಕೆ ಕಿರಿ ಕಿರಿ ಉಂಟು ಮಾಡುತ್ತಿದೆ ಗೊತ್ತಾ? ಟೂರ್ನಮೆಂಟ್ ಆರಂಭವಾಗುವಾಗ ಈ ಸುರಕ್ಷಾ ವಲಯಕ್ಕೆ ಸೇರಿಕೊಳ್ಳುವ ಕ್ರಿಕೆಟಿಗರಿಗೆ ಬೇಕಾಬಿಟ್ಟಿ ಹೊರಗೆ ಓಡಾಡುವಂತಿಲ್ಲ. ಕುಟುಂಬದವರೊಡನೆ ಒಳ ಪ್ರವೇಶಿಸಿದರೆ ಹೊರಬರುವಂತಿಲ್ಲ. ಒಂದು ವೇಳೆ ಕುಟುಂಬದವರು ಜತೆಗೇ ಬಾರದಿದ್ದರೆ ಮತ್ತೆ ಅವರನ್ನು ಭೇಟಿಯಾಗಲು ಅವಕಾಶವಿಲ್ಲ. ಅಭ್ಯಾಸ,