ಲಂಡನ್: ಇಂಗ್ಲೆಂಡ್ ಕ್ರಿಕೆಟಿಗ ಬೆನ್ ಸ್ಟೋಕ್ಸ್ ಇತ್ತೀಚೆಗೆ ಮಾನಸಿಕ ಆರೋಗ್ಯ ಕಾರಣ ನೀಡಿ ಕ್ರಿಕೆಟ್ ನಿಂದ ಅನಿರ್ದಿಷ್ಟಾವಧಿ ಬ್ರೇಕ್ ಪಡೆಯುವ ನಿರ್ಧಾರ ಪ್ರಕಟಿಸಿದ್ದರು.ಇಂಗ್ಲೆಂಡ್ ನ ಸ್ಟಾರ್ ಕ್ರಿಕೆಟಿಗ ಮಾನಸಿಕ ಆರೋಗ್ಯ ಸ್ಥಿತಿ ಸರಿಯಿಲ್ಲ ಎನ್ನಲು ಕಾರಣ ಇತ್ತೀಚೆಗೆ ಕೊರೋನಾ ಕಾರಣದಿಂದಾಗಿ ಕ್ರಿಕೆಟಿಗರಿಗೆ ಸುದೀರ್ಘವಾಗಿ ಬಯೋ ಬಬಲ್ ವಾತಾವರಣದಲ್ಲಿ ಕಳೆಯಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿರುವುದು ಎನ್ನಲಾಗಿದೆ.ಬಿಡುವಿಲ್ಲದ ಕ್ರಿಕೆಟ್ ನಿಂದಾಗಿ ಕ್ರಿಕೆಟಿಗರು ಹೆಚ್ಚು ಸಮಯ ಕಠಿಣ ಬಯೋ ಬಬಲ್ ವಾತಾವರಣದಲ್ಲೇ ಕಾಲ ಕಳೆಯುತ್ತಾರೆ.