ನೋಟು ನಿಷೇಧದಿಂದಾಗಿ ಪರದಾಡಿದ್ದ ಕ್ರಿಕೆಟಿಗರು

ಮುಂಬೈ| Krishnaveni| Last Modified ಬುಧವಾರ, 8 ನವೆಂಬರ್ 2017 (10:18 IST)
ಮುಂಬೈ: ನೋಟು ನಿಷೇಧವಾಗಿ ಇಂದಿಗೆ ಒಂದು ವರ್ಷ. ನೋಟು ನಿಷೇಧವಾದ ಸಂದರ್ಭದಲ್ಲಿ ಆ ಬಿಸಿ ಕ್ರಿಕೆಟಿಗರಿಗೂ ತಟ್ಟಿತ್ತು. ಆ ಸಂದರ್ಭದಲ್ಲಿ ಇಂಗ್ಲೆಂಡ್ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಬಂದು ಪಡಬಾರದ ಕಷ್ಟ ಅನುಭವಿಸಿತ್ತು.
 
ಇಂಗ್ಲೆಂಡ್ ಕ್ರಿಕೆಟಿಗರು ಮಾತ್ರವಲ್ಲ, ಅಭಿಮಾನಿಗಳೂ ದುಡ್ಡಿಲ್ಲದೇ ಪರದಾಡಿದ್ದರು. ನೋಟು ನಿಷೇಧವಾಗುವ ಮೊದಲೇ ಇಂಗ್ಲೆಂಡ್ ಕ್ರಿಕೆಟ್ ತಂಡ ಭಾರತಕ್ಕೆ ಬಂದಿಳಿದಿತ್ತು. ಹಾಗಾಗಿ ಅವರ ಬಳಿ ಸಾಕಷ್ಟು ಹಣವಿರಲಿಲ್ಲ.
 
ಆದರೆ ಭಾರತಕ್ಕೆ ಬಂದ ಮೇಲೆ ಬೇಕಾದ ಹಾಗೆ ಭಾರತೀಯ ನೋಟು ಸಿಗುತ್ತಿರಲಿಲ್ಲ. ಹೀಗಾಗಿ ಸಾಕಷ್ಟು ದುಡ್ಡಿಲ್ಲದೇ ಸ್ವದೇಶಕ್ಕೆ ಮರಳಲೂ ಆಗದೇ ಪರದಾಡಿದ್ದರು. ಇದರ ನಡುವೆ ಇಂಗ್ಲೆಂಡ್ ಅಭಿಮಾನಿಯೊಬ್ಬರಿಗೆ ತೀವ್ರ ಅನಾರೋಗ್ಯವಾಗಿ ಆಸ್ಪತ್ರೆಗೆ ಕಟ್ಟಲು ದುಡ್ಡಿಲ್ಲದೇ ಪರದಾಡಿದ ಘಟನೆಯೂ ನಡೆದಿತ್ತು.
 
ಆ ಸಂದರ್ಭದಲ್ಲಿ ಬಿಸಿಸಿಐ ಕೂಡಾ ಕ್ರಿಕೆಟಿಗರ ಹೋಟೆಲ್ ಭತ್ಯೆ ಭರಿಸಲಾಗದೇ ಒದ್ದಾಡಿತ್ತು. ಕೊನೆಗೆ ಬಿಸಿಸಿಐ ಪರವಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯೇ ಪ್ರವಾಸ ಭತ್ಯೆ ಭರಿಸಿತ್ತು. ಇದೆಲ್ಲಾ ನಡೆದು ಇದೀಗ ಒಂದು ವರ್ಷ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :