ಚೆನ್ನೈ: ಐಪಿಎಲ್ ನ ಮುಂದಿನ ಆವೃತ್ತಿಗೆ ಮ್ಯಾಚ್ ಫಿಕ್ಸಿಂಗ್ ನಿಷೇಧ ಶಿಕ್ಷೆ ಮುಗಿಸಿ ಮರಳುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಹಳೇ ನಾಯಕ ಧೋನಿಯನ್ನು ಉಳಿಸಿಕೊಳ್ಳಲು ಉತ್ಸುಕವಾಗಿದೆ ಎನ್ನಲಾಗಿದೆ. ಐಪಿಎಲ್ ಆಡಳಿತ ಮಂಡಳಿಯ ನಿಯಮದ ಪ್ರಕಾರ ಎಲ್ಲಾ ತಂಡಗಳಿಗೂ ಮೂವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗುವುದು. ಅದರಂತೆ ಚೆನ್ನೈ ಧೋನಿ ಮತ್ತು ಆರ್ ಅಶ್ವಿನ್ ಅಲ್ಲದೆ ವಿದೇಶಿ ಆಟಗಾರ ಫಾ ಡು ಪ್ಲೆಸಿಸ್ ರನ್ನು ಉಳಿಸಿಕೊಳ್ಳಲು ಮುಂದಾಗಿದ್ದರೆ,