ಕೇಪ್ ಟೌನ್: ಭಾರತದ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ದ.ಆಫ್ರಿಕಾ ತಂಡಕ್ಕೆ ಶಾಕಿಂಗ್ ಸುದ್ದಿಯೊಂದು ಬಂದಿದೆ. ಆದರೆ ಭಾರತದ ಪಾಲಿಗೆ ಇದು ಸಿಹಿ ಸುದ್ದಿಯಾಗಲಿದೆ. ವಿಶ್ವ ವಿಖ್ಯಾತ ಬೌಲರ್ ಡೇಲ್ ಸ್ಟೇನ್ ಗಾಯದಿಂದ ಚೇತರಿಸಿಕೊಂಡು ಬಹಳ ದಿನಗಳ ನಂತರ ಟೀಂ ಇಂಡಿಯಾ ವಿರುದ್ಧದ ಪಂದ್ಯಕ್ಕೆ ಕಣಕ್ಕಿಳಿದಿದ್ದರು. ಆದರೆ ಇದೀಗ ಅವರು ಮತ್ತೆ ಗಾಯಗೊಂಡಿದ್ದು, ಸರಣಿಯಿಂದ ಹೊರಗುಳಿಯಲಿದ್ದಾರೆ.ನಿನ್ನೆ ಬೌಲಿಂಗ್ ಮಾಡುತ್ತಿರುವಾಗ ಮತ್ತೆ ಕಾಲಿನ ನೋವು ಕಾಣಿಸಿಕೊಂಡಿದ್ದು, ಅರ್ಧದಿಂದಲೇ ಹೊರ ನಡೆದಿದ್ದರು.