ಮುಂಬೈ: ವೆಸ್ಟ್ ಇಂಡೀಸ್ ಕ್ರಿಕೆಟಿಗ ಡಾರೆನ್ ಸಾಮಿ ತಮ್ಮ ಮೇಲೆ ಐಪಿಎಲ್ ನಲ್ಲಿ ತಾವು ಪ್ರತಿನಿಧಿಸುತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರರೂ ಜನಾಂಗೀಯ ನಿಂದನೆ ಮಾಡಿದ್ದರು ಎಂದು ಆರೋಪಿಸಿದ್ದಾರೆ. ತಾವು ಹೈದರಾಬಾದ್ ಪರ ಆಡುವಾಗ ಸಹ ಆಟಗಾರರು ಕರಿಯ ಎಂದೇ ಕರೆಯುತ್ತಿದ್ದರು. ಅಷ್ಟೇ ಅಲ್ಲ, ಇದಕ್ಕೆ ಸಾಕ್ಷಿ ಎನ್ನುವಂತೆ ತಮ್ಮ ಜತೆಗಿನ ಫೋಟೋ ಪ್ರಕಟಿಸಿದ್ದ ಇಶಾಂತ್ ಶರ್ಮಾ ತಮ್ಮನ್ನು ಕಾಲಾ (ಕರಿಯ) ಎಂದು ಸಂಬೋಧಿಸಿದ್ದನ್ನು ಉಲ್ಲೇಖಿಸಿದ್ದಾರೆ.2014 ರಲ್ಲಿ ಇಶಾಂತ್