Widgets Magazine

ವಿರಾಟ್ ಕೊಹ್ಲಿಗೆ ತಲೆ ಬೋಳಿಸಿಕೊಳ್ಳಲು ಸವಾಲು ಹಾಕಿದ ಆಸೀಸ್ ಕ್ರಿಕೆಟಿಗ ವಾರ್ನರ್

ಮುಂಬೈ| Krishnaveni K| Last Modified ಬುಧವಾರ, 1 ಏಪ್ರಿಲ್ 2020 (09:46 IST)
ಮುಂಬೈ: ವಿಶ್ವದೆಲ್ಲೆಡೆ ಕೊರೋನಾವೈರಸ್ ಮಹಾಮಾರಿ ತಾಂಡವವಾಡುತ್ತಿದ್ದು, ಈ ಮಾರಕ ರೋಗದ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
 

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಚಾಲೆಂಜ್ ಅಭಿಯಾನ ಆರಂಭವಾಗಿದ್ದು, ವೈದ್ಯಕೀಯ ಸಿಬ್ಬಂದಿಗೆ ಅಭಿನಂದಿಸುವ ನಿಟ್ಟಿನಲ್ಲಿ ತಲೆ ಕೂದಲಿಗೆ ಕತ್ತರಿ ಹಾಕಲಾಗುತ್ತಿದೆ.
 
ಈ ಅಭಿಯಾನದಲ್ಲಿ ಪಾಲ್ಗೊಂಡ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ತಲೆಬೋಳಿಸಿಕೊಂಡು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೂ ಅಭಿಯಾನದಲ್ಲಿ ಪಾಲ್ಗೊಂಡು ತಲೆಬೋಳಿಸಿಕೊಳ್ಳುವಂತೆ ಸವಾಲು ಹಾಕಿದ್ದಾರೆ. ಇದನ್ನು ಕೊಹ್ಲಿ ಸ್ವೀಕರಿಸುತ್ತಾರಾ ಕಾದು ನೋಡಬೇಕು.
ಇದರಲ್ಲಿ ಇನ್ನಷ್ಟು ಓದಿ :