ಕೊರೋನಾ ಗೆದ್ದು ಸಿಎಸ್ ಕೆ ತಂಡ ಕೂಡಿಕೊಂಡ ವೇಗಿ ದೀಪಕ್ ಚಹರ್

ದುಬೈ| Krishnaveni K| Last Modified ಗುರುವಾರ, 10 ಸೆಪ್ಟಂಬರ್ 2020 (11:54 IST)
ದುಬೈ: ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ದೀಪಕ್ ಚಹರ್ ಈಗ ಚೇತರಿಸಿಕೊಂಡಿದ್ದು, ಅಭ್ಯಾಸಕ್ಕಿಳಿದಿದ್ದಾರೆ.
 

ದುಬೈಗೆ ತಲುಪಿದ ಬಳಿಕ ಸಿಎಸ್ ಕೆ ತಂಡದಲ್ಲಿ 12 ಮಂದಿ ಸಹಾಯಕ ಸಿಬ್ಬಂದಿ ಮತ್ತು ಋತುರಾಜ್ ಗಾಯಕ್ ವಾಡ್, ವೇಗಿ ದೀಪಕ್ ಚಹರ್ ಗೆ ಕೊರೋನಾ ಕಾಣಿಸಿಕೊಂಡಿತ್ತು. ಹೀಗಾಗಿ ಇವರೆಲ್ಲರನ್ನೂ ಕ್ವಾರಂಟೈನ್ ಗೊಳಪಡಿಸಲಾಗಿತ್ತು. ಇದೀಗ ಕೊರೋನಾದಿಂದ ಚೇತರಿಸಿಕೊಂಡ ದೀಪಕ್ ಕ್ವಾರಂಟೈನ್ ಅವಧಿ ಮುಗಿಸಿ ನೆಟ್ ಪ್ರಾಕ್ಟೀಸ್ ಗೆ ಮರಳಿದ್ದಾರೆ. ಆದರೆ ಗಾಯಕ್ ವಾಡ್ ಇನ್ನೂ ಕ್ವಾರಂಟೈನ್ ಅವಧಿಯಲ್ಲೇ ಇದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :