ದುಬೈ: ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಕೋಚ್ ಆಗಿದ್ದ ವಾಲ್ ರಾಹುಲ್ ದ್ರಾವಿಡ್ ತಮ್ಮ ಜೊತೆಗೆ ಮಾಡಿದ ತಮಾಷೆಯ ಪ್ರಸಂಗವೊಂದನ್ನು ಕ್ರಿಕೆಟಿಗ ದೀಪಕ್ ಚಹರ್ ನೆನೆಸಿಕೊಂಡಿದ್ದಾರೆ.ಶ್ರೀಲಂಕಾ ಸರಣಿಯಲ್ಲಿ ಎರಡನೇ ಪಂದ್ಯದ ಗೆಲುವಿನ ರೂವಾರಿಯಾಗಿದ್ದ ದೀಪಕ್ ಚಹರ್ ಆ ಸರಣಿಯಲ್ಲಿ ದ್ರಾವಿಡ್ ತಮ್ಮನ್ನು ಕಿಚಾಯಿಸಿದ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.‘ಶ್ರೀಲಂಕಾ ತಲುಪಿದಾಗ ರಾಹುಲ್ ಸರ್ ಮೊದಲು ನನ್ನ ಬಳಿ ಕೇಳಿದ್ದು, ನಿನ್ನ ವಯಸ್ಸು ಎಷ್ಟು ಎಂದು. ನಾನು 28 ಕಳೆದು 29 ಕ್ಕೆ