ಆರ್ ಸಿಬಿ ಅಭ್ಯಾಸ ಪಂದ್ಯದಲ್ಲಿ ಕನ್ನಡಿಗ ದೇವದತ್ತ ಪಡಿಕ್ಕಲ್ ಮಿಂಚಿಂಗ್

ದುಬೈ| Krishnaveni K| Last Modified ಶುಕ್ರವಾರ, 11 ಸೆಪ್ಟಂಬರ್ 2020 (12:18 IST)
ದುಬೈ: ಕ್ಕೆ ಅಭ್ಯಾಸ ಆರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕನ್ನಡಿಗ ದೇವದತ್ತ್ ಪಡಿಕ್ಕಲ್ ಅವರ ಭರ್ಜರಿ ಬ್ಯಾಟಿಂಗ್ ಬಗ್ಗೆ ವಿಡಿಯೋ ಪ್ರಕಟಿಸಿದೆ.
 

ಅಭ್ಯಾಸದ ವೇಳೆ ದೇವದತ್ತ್ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ್ದಾರೆ. ಇದರ ಜತೆಗೆ ಅವರಿಗೆ ಪಾರ್ಥಿವ್ ಪಟೇಲ್, ಎಬಿಡಿ ವಿಲಿಯರ್ಸ್ ಹಲವು ಅಮೂಲ್ಯ ಸಲಹೆಗಳನ್ನಿತ್ತಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಪಾರ್ಥಿವ್ ಜತೆಗೆ ದೇವದತ್ತ್ ಪಡಿಕ್ಕಲ್ ಓಪನಿಂಗ್ ಮಾಡುವ ಸಾಧ‍್ಯತೆಯಿದೆ. ದೇಶೀಯ ಕ್ರಿಕೆಟ್ ನಲ್ಲಿ ಕರ್ನಾಟಕ ಪರ ರನ್ ಗಳಿಸಿದ್ದ ದೇವದತ್ತ್ ಪಡಿಕ್ಕಲ್ ಐಪಿಎಲ್ ನಲ್ಲಿ ಮಿಂಚಿದರೆ ಮುಂದೊಂದು ದಿನ ಟೀಂ ಇಂಡಿಯಾಗೂ ಆಯ್ಕೆಯಾಗುವ ಸಾಧ‍್ಯತೆಯಿದೆ.
ಇದರಲ್ಲಿ ಇನ್ನಷ್ಟು ಓದಿ :