ಕೊಲೊಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಯುವ ಟೀಂ ಇಂಡಿಯಾ ಕ್ರಿಕಟಿಗರಿಗೆ ಈಗ ಕೋಚ್ ರಾಹುಲ್ ದ್ರಾವಿಡ್ ಆಪತ್ಬಾಂಧವ. ತಮ್ಮ ನೆಚ್ಚಿನ ತಾರೆಯೇ ಕೋಚ್ ಆಗಿ ಬಂದ ಖುಷಿಯಲ್ಲಿ ಕ್ರಿಕೆಟಿಗರಿದ್ದಾರೆ. ಈ ನಡುವೆ ಕನ್ನಡಿಗ ಕ್ರಿಕೆಟಿಗ ದೇವದತ್ತ್ ಪಡಿಕ್ಕಲ್ ಮೊದಲ ಬಾರಿಗೆ ದ್ರಾವಿಡ್ ರನ್ನು ಭೇಟಿ ಮಾಡಿದ ಅನುಭವ ಹಂಚಿಕೊಂಡಿದ್ದಾರೆ. ಮತ್ತು ಈಗ ಅವರದೇ ಕೋಚಿಂಗ್ ನಲ್ಲಿ ಆಡುತ್ತಿರುವುದು ಕ್ರಿಕೆಟಿಗರಿಗೆ ವಿಶೇಷ ಅನುಭವ ಕೊಡುತ್ತಿದೆಯಂತೆ.‘ನಾನು ಮೊದಲ ಬಾರಿಗೆ ದ್ರಾವಿಡ್ ಸರ್ ಭೇಟಿಯಾಗಿದ್ದು ಚಿಕ್ಕವನಿದ್ದಾಗ