ಲಂಡನ್: ದ.ಆಫ್ರಿಕಾ ವಿರುದ್ಧ ವಿಶ್ವಕಪ್ ಕೂಟದ ಮೊದಲ ಪಂದ್ಯವಾಡಿದ ಟೀಂ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಆದರೆ ಈ ಪಂದ್ಯದಲ್ಲಿ ವಿಕೆಟ್ ಕೀಪರ್ ಧೋನಿ ಗ್ಲೌಸ್ ಎಲ್ಲರ ಗಮನಸೆಳೆದಿದೆ. ಧೋನಿ ಈ ಪಂದ್ಯದಲ್ಲಿ ಭಾರತೀಯ ಅರೆಸೇನಾ ಪಡೆಯ ಸಮವಸ್ತ್ರವನ್ನು ಪ್ರತಿನಿಧಿಸುವ ಚಿಹ್ನೆಯ ಗ್ಲೌಸ್ ಧರಿಸಿ ಆಡಿದ್ದಾರೆ. ಆ ಮೂಲಕ ಭಾರತೀಯ ಸೇನೆಗೆ ಗೌರವ ಸಲ್ಲಿಸಿದ್ದಾರೆ.ಭಾರತೀಯ ಸೇನೆಯ ಗೌರವಯುತ ಸದಸ್ಯರೂ ಆಗಿರುವ ಧೋನಿ ವಿಶ್ವಕಪ್ ನಲ್ಲಿ ಈ ಮೂಲಕ ದೇಶಪ್ರೇಮ ಮೆರೆದಿದ್ದಾರೆ.