ಧೋನಿ ನಿವೃತ್ತಿಗೆ ಸಿಕ್ಕಿದೆ ಮಹತ್ವದ ಸುಳಿವು!

ಲಂಡನ್, ಶುಕ್ರವಾರ, 5 ಜುಲೈ 2019 (09:50 IST)

ಲಂಡನ್: ಈ ಬಾರಿಯ ವಿಶ್ವಕಪ್ ನಲ್ಲಿ ಭಾರತ ಆಡುವ ಕೊನೆಯ ಪಂದ್ಯವೇ ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ಪಾಲಿನ ವಿದಾಯ ಪಂದ್ಯವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
 


ಈ ಬಗ್ಗೆ ಧೋನಿ ಸ್ಪಷ್ಟನೆ ನೀಡದೇ ಇದ್ದರೂ ಅವರ ನಡೆಯೊಂದು ಇದರ ಬಗ್ಗೆ ಮಹತ್ವದ ಸುಳಿವು ನೀಡಿದೆ. ಇತ್ತೀಚೆಗೆ ಧೋನಿ ಒಂದೊಂದು ಪಂದ್ಯದಲ್ಲಿ ತಮ್ಮ ಬ್ಯಾಟ್ ಮೇಲೆ ಒಂದೊಂದು ಬ್ರಾಂಡ್ ನ ಸ್ಟಿಕ್ಕರ್ ಅಂಟಿಸಿಕೊಂಡು ಆಡುತ್ತಿದ್ದಾರೆ.
 
ಆ ಮೂಲಕ ತಮ್ಮ ವೃತ್ತಿ ಜೀವನದಲ್ಲಿ ನೆರವಾದ ಎಲ್ಲಾ ರಾಯಭಾರಿ ಕಂಪನಿಗಳೂ ಧನ್ಯವಾದ ಸಲ್ಲಿಸುತ್ತಿದ್ದಾರೆ. ಈ ಮೂಲಕ ಧೋನಿ ತಮ್ಮ ವಿದಾಯದ ಸುಳಿವು ನೀಡುತ್ತಿದ್ದಾರೆ. ಈ ಬಗ್ಗೆ ಧೋನಿ ಆತ್ಮೀಯರೇ ಈ ರೀತಿ ತಮಗೆ ನೆರವಾದವರಿಗೆ ಧೋನಿ ಥ್ಯಾಂಕ್ಸ್ ಹೇಳುವ ವಿಧಾನವಿದು ಎಂದಿದ್ದಾರೆ. ಹಾಗಿದ್ದರೆ ಧೋನಿ ಪಾಲಿಗೆ ಇದುವೇ ಕೊನೆಯ ಅಂತಾರಾಷ್ಟ್ರೀಯ ಸರಣಿಯಾಗಲಿದೆ ಎಂದೇ ಹೇಳಲಾಗುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

87 ರ ಅಭಿಮಾನಿ ಅಜ್ಜಿಗೆ ನೀಡಿದ ಪ್ರಾಮಿಸ್ ಉಳಿಸಿಕೊಂಡ ವಿರಾಟ್ ಕೊಹ್ಲಿ

ಲಂಡನ್: ಬಾಂಗ್ಲಾದೇಶ ವಿರುದ್ಧ ವಿಶ್ವಕಪ್ ಪಂದ್ಯದ ವೇಳೆ ಮೈದಾನದಲ್ಲಿ ಕುಳಿತು ಟೀಂ ಇಂಡಿಯಾ ...

news

ವಿಶ್ವಕಪ್ 2019: ಸೆಮಿಫೈನಲ್ ನಲ್ಲಿ ಟೀಂ ಇಂಡಿಯಾಗೆ ಯಾರಾಗ್ತಾರೆ ಎದುರಾಳಿ? ಇಲ್ಲಿದೆ ಲೆಕ್ಕಾಚಾರ

ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ಕೊನೆಯ ಘಟ್ಟಕ್ಕೆ ಬಂದು ತಲುಪಿದೆ. ಇದೀಗ ಸೆಮಿಫೈನಲ್ ಗೆ ತಲುಪಲಿರುವ ...

news

ಸಾಕು ಮುಚ್ಚು, ನಿನ್ನ ಮಾತು ಕೇಳಿ ಸಾಕಾಗಿದೆ! ಸಂಜಯ್ ಮಂಜ್ರೇಕರ್ ಗೆ ಕ್ರಿಕೆಟಿಗ ರವೀಂದ್ರ ಜಡೇಜಾ ವಾರ್ನಿಂಗ್!

ಲಂಡನ್: ತಮ್ಮ ಬಗ್ಗೆ ಕೇವಲವಾಗಿ ಮಾತನಾಡಿದ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಗೆ ಟೀಂ ...

news

ಅಂಬಟಿ ರಾಯುಡು ನಿವೃತ್ತಿ: ವಿರಾಟ್ ಕೊಹ್ಲಿ ಮೇಲೆ ಗೂಬೆ ಕೂರಿಸಿದ ಅಭಿಮಾನಿಗಳು

ಮುಂಬೈ: ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿದ್ದ ಅಂಬಟಿ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್ ...