ಚೆನ್ನೈ: ಮೊನ್ನೆಯಷ್ಟೇ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದ ನಡುವೆ ತಮ್ಮನ್ನು ಮುಟ್ಟಿ ಮಾತನಾಡಿಸಲು ಮೈದಾನಕ್ಕೆ ನುಗ್ಗಿದ ಅಭಿಮಾನಿಯನ್ನು ಧೋನಿ ಆಟ ಆಡಿಸಿದ ಘಟನೆ ಎಲ್ಲರೂ ನೋಡಿದ್ದೀರಿ.ಇದೀಗ ಮತ್ತೆ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದಾಗ ಅಭಿಮಾನಿಯೊಬ್ಬನನ್ನು ಮತ್ತೆ ಅದೇ ರೀತಿ ಆಟ ಆಡಿಸಿದ್ದಾರೆ. ಮತ್ತೆ ಚೇಸಿಂಗ್ ಮಾಡಿ ಅಭಿಮಾನಿಯೊಂದಿಗೆ ತಮಾಷೆ ಮಾಡಿದ್ದಾರೆ.ಚೆನ್ನೈ ಮೈದಾನದಲ್ಲಿ ಅಭ್ಯಾಸ ನಡೆಯುತ್ತಿದ್ದ ವೇಳೆ ಅಭಿಮಾನಿಯೊಬ್ಬ ಕಾಲು ಮುಟ್ಟಿ ನಮಸ್ಕರಿಸಲು ಓಡೋಡಿ ಬಂದಿದ್ದ.