ಯುವ ಸ್ಪಿನ್ನರ್ ಶಹಬಾಜ್ ನದೀಂಗೆ ಧೋನಿ ಕೊಟ್ಟ ಆ ಕಾಂಪ್ಲಿಮೆಂಟ್ ಏನು ಗೊತ್ತಾ?

ರಾಂಚಿ| Krishnaveni K| Last Modified ಗುರುವಾರ, 24 ಅಕ್ಟೋಬರ್ 2019 (09:25 IST)
ರಾಂಚಿ: ದ.ಆಫ್ರಿಕಾ ವಿರುದ್ಧ ರಾಂಚಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದ ಯುವ ಬೌಲರ್ ಶಹಬಾಜ್ ನದೀಂಗೆ ಹಿರಿಯ ಕ್ರಿಕೆಟಿಗ ಧೋನಿಯಿಂದ ಪ್ರಶಂಸೆ ಸಿಕ್ಕಿದೆ.

 
ರಾಂಚಿ ಮೂಲದವರೇ ಆದ ನದೀಂ ಈ ಹಿಂದೆ ದೇಶೀಯ ಕ್ರಿಕೆಟ್ ನಲ್ಲಿ ಧೋನಿ ಜತೆಗೆ ಆಡಿದ ಅನುಭವ ಹೊಂದಿದ್ದಾರಂತೆ. ಅಂತಿಮ ದಿನ ಮೈದಾನಕ್ಕೆ ಆಗಮಿಸಿದ್ದ ಧೋನಿ ಟೀಂ ಇಂಡಿಯಾ ಕ್ರಿಕೆಟಿಗರನ್ನು ಭೇಟಿಯಾಗಿದ್ದಾರೆ. ಈ ವೇಳೆ ನದೀಂ ವಿಶೇಷ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ.
 
ಧೋನಿ ಬಳಿ ತನ್ನ ಆಟ ಹೇಗಿತ್ತು ಎಂದು ನದೀಂ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಧೋನಿ ನಿನ್ನ ಆಟದಲ್ಲಿ ಈಗ ಪ್ರಬುದ್ಧತೆ ಇದೆ. ನೀನು ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದ್ದೀಯಾ. ನಾನು ನಿನ್ನ ಆಟವನ್ನುಗಮನಿಸಿದ್ದೇನೆ ಎಂದಿದ್ದಾರಂತೆ. ತನ್ನ ಹಿರಿಯಣ್ಣನಂತಹಾ ಧೋನಿಯಿಂದ ಇಂತಹ ಮಾತು ಕೇಳಿ ನದೀಂ ಕೂಡಾ ಖುಷ್ ಆಗಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :