ಪುಣೆ: ನ್ಯೂಜಿಲೆಂಡ್ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳ ಜಯಭೇರಿ ಭಾರಿಸುವುದರ ಜತೆಗೆ ವಿಕೆಟ್ ಕೀಪರ್ ಧೋನಿ ಹೊಸದೊಂದು ದಾಖಲೆಯನ್ನೂ ನಿರ್ಮಿಸಿದರು. ಈ ಪಂದ್ಯದ ಮೂಲಕ ಧೋನಿ 200 ಕ್ಯಾಚ್ ಪಡೆದ ವಿಶ್ವದ ಮೂರನೇ ಮತ್ತು ಭಾರತದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡರು. ಭುವನೇಶ್ವರ್ ಕುಮಾರ್ ಬೌಲಿಂಗ್ ನಲ್ಲಿ ಮಾರ್ಟಿನ್ ಗುಪ್ಟಿನ್ ಹೊಡೆದ ಬಾಲ್ ನ್ನು ಕ್ಯಾಚ್ ಪಡೆದ ಧೋನಿ ಈ ದಾಖಲೆ ನಿರ್ಮಿಸಿದರು.ಶ್ರೀಲಂಕಾದ