ಮುಂಬೈ: ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಎಂದರೆ ಯಾರ್ಕರ್ ಸ್ಪೆಷಲಿಸ್ಟ್ ಎಂದೇ ಅರ್ಥ. ಆದರೆ ಬುಮ್ರಾಗೆ ಯಾರ್ಕರ್ ಬಾಲ್ ಎಸೆಯಬೇಡ ಎಂದು ಧೋನಿ ಹಿಂದೊಮ್ಮೆ ತಾಕೀತು ಮಾಡಿದ್ದರಂತೆ! ಈ ಬಗ್ಗೆ ಸ್ವತಃ ಬುಮ್ರಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.2016 ರಲ್ಲಿ ಸಿಡ್ನಿಯಲ್ಲಿ ಧೋನಿ ನಾಯಕತ್ವದಲ್ಲಿ ನಾನು ಮೊದಲ ಏಕದಿನ ಪಂದ್ಯವಾಡಿದ್ದೆ. ಅದುವರೆಗೆ ಧೋನಿ ನಾನು ಬೌಲಿಂಗ್ ಮಾಡುವುದನ್ನು ನೋಡಿರಲಿಲ್ಲ. ಡೆತ್ ಓವರ್ ನಲ್ಲಿ ನಾನು ಯಾರ್ಕರ್ ಎಸೆಯಬಹುದೇ ಎಂದು ಅವರನ್ನು ಕೇಳಿದೆ.