ಚೆನ್ನೈ: ಧೋನಿಗೂ ಚೆನ್ನೈ ಮೈದಾನಕ್ಕೂ ವಿಶೇಷ ಸಂಬಂಧವಿದೆ. ಚೆನ್ನೈ ಅಭಿಮಾನಿಗಳು ಧೋನಿ ಮೇಲೆ ತಮ್ಮ ಮನೆ ಮಗನಷ್ಟೇ ಪ್ರೀತಿ ಇಟ್ಟುಕೊಂಡಿದ್ದಾರೆ. ಅದು ನಿನ್ನೆಯ ಪಂದ್ಯದಲ್ಲಿ ಸಾಬೀತಾಯಿತು.ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಚೆನ್ನೈ ಅಭಿಮಾನಿಗಳು ಬೇಸರಪಟ್ಟುಕೊಳ್ಳಲಿಲ್ಲ. ಕಾರಣ ಧೋನಿ. ಪಾಂಡೆ ವಿಕೆಟ್ ಬಿದ್ದ ಮೇಲೆ ಧೋನಿ ಮೈದಾನಕ್ಕಿಳಿಯುತ್ತಿದ್ದಂತೆ ಮೈದಾನದಲ್ಲಿದ್ದ ಅಭಿಮಾನಿಗಳ ಹರ್ಷೋದ್ಘಾರ ಮೇರೆ ಮೀರಿತ್ತು.ಧೋನಿ ಬ್ಯಾಟ್ ಹಿಡಿದು ಮೈದಾನಕ್ಕಿಳಿಯುತ್ತಿದ್ದಂತೆ, ಮೈದಾನದಲ್ಲಿದ್ದ ಅಭಿಮಾನಿಗಳು