ಜಾಹೀರಾತಿಗೆ ನೋ, ತೋಟಗಾರಿಕೆಗೆ ಜೈ ಎಂದ ಮಾಹಿ! ಸದ್ಯದಲ್ಲೇ ಬರಲಿದೆ ಧೋನಿ ಬ್ರಾಂಡ್

ರಾಂಚಿ| Krishnaveni K| Last Modified ಗುರುವಾರ, 9 ಜುಲೈ 2020 (10:30 IST)
ರಾಂಚಿ: ಕೊರೋನಾ ಕಾರಣದಿಂದ ತಮ್ಮ ಫಾರ್ಮ್ ಹೌಸ್ ನಲ್ಲೇ ಉಳಿದುಕೊಂಡಿರುವ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಧೋನಿ ಇದೀಗ ಕ್ರಿಕೆಟ್, ಬ್ಯುಸಿನೆಸ್ ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

 

ಕೊರೋನಾ ಕಾರಣದಿಂದಾಗಿ ಜಾಹೀರಾತು ಶೂಟಿಂಗ್ ಮಾಡುವುದಕ್ಕೆ ನೋ ಎಂದಿರುವ ಧೋನಿ ಸಾವಯವ ಕೃಷಿ ಬಗ್ಗೆ ಗಂಭೀರವಾಗಿ ತೊಡಗಿಸಿಕೊಂಡಿದ್ದು ಸದ್ಯದಲ್ಲೇ ತಮ್ಮದೇ ಬ್ರ್ಯಾಂಡ್ ನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲಿದ್ದಾರಂತೆ.
 
ಈ ಬಗ್ಗೆ ಅವರ ಮ್ಯಾನೇಜರ್ ಮಿಥಿರ್ ದಿವಾಕರ್ ಹೇಳಿಕೆ ನೀಡಿದ್ದು, ದೇಶಭಕ್ತಿ ಎನ್ನುವುದು ಧೋನಿ ರಕ್ತದಲ್ಲೇ ಇದೆ. ಸೈನ್ಯಕ್ಕೆ ಸೇರಿದ್ದಲ್ಲದೆ, ಕೆಲವು ದಿನ ತರಬೇತಿಯನ್ನೂ ಪಡೆದಿದ್ದ ಧೋನಿ ಈಗ ತಮ್ಮ 40-50 ಎಕರೆ ತೋಟದಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡು ಪಪ್ಪಾಯ, ಬಾಳೆ ಇತ್ಯಾದಿ ಕೃಷಿ ಮಾಡುತ್ತಿದ್ದಾರೆ. ಕಂಪನಿಗಳ ರಾಯಭಾರಿ ಆಗುವುದಕ್ಕಿಂತಲೂ ಕೃಷಿಯಲ್ಲಿ ತೊಡಗಿಸಿಕೊಂಡು ಕೃಷಿಕರಿಗೆ ನೆರವಾಗುವುದು ಉತ್ತಮ ಎಂದು ಅವರು ನಿರ್ಧಾರಕ್ಕೆ ಬಂದಿದ್ದಾರೆ’ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :