ಲಂಡನ್: ಈ ವಿಶ್ವಕಪ್ ನ ಕೊನೆಯ ಪಂದ್ಯವೇ ಧೋನಿ ಪಾಲಿಗೆ ವಿದಾಯ ಪಂದ್ಯವಾಗಲಿದೆ ಎಂಬ ಊಹಾಪೋಹಗಳ ಬಗ್ಗೆ ಸ್ವತಃ ಧೋನಿಯೇ ಪ್ರತಿಕ್ರಿಯೆ ನೀಡಿದ್ದಾರೆ.ಧೋನಿ ವಿಶ್ವಕಪ್ ನ ಅಂತಿಮ ಪಂದ್ಯದಲ್ಲಿ ವಿದಾಯ ಹೇಳಬಹುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ನೀಡಿದ ಹೇಳಿಕೆ ಅವರ ನಿವೃತ್ತಿ ಬಗ್ಗೆ ಭಾರೀ ಗಾಸಿಪ್ ಹಬ್ಬಿತ್ತು. ಈ ನಡುವೆ ಅವರ ನಿಧಾನಗತಿಯ ಬ್ಯಾಟಿಂಗ್ ನಿಂದಾಗಿ ಬೇಸತ್ತ ಕೆಲವು ಅಭಿಮಾನಿಗಳು ಅವರು ನಿವೃತ್ತಿ ಹೇಳಬೇಕು ಎಂದು ಸೋಷಿಯಲ್ ಮೀಡಿಯಾ ಮೂಲಕ